ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ “ದೇವನದಿ” ಎಂದು ವರ್ಣಿಸಲ್ಪಟ್ಟಿರುವ ಗಂಗಾ ನದಿ

ಭಾರತದ ಪುರಾಣ ಮತ್ತು ಮಹಾಕಾವ್ಯಗಳ ಲ್ಲಿ “ದೇವನದಿ” ಎಂದು ವರ್ಣಿಸಲ್ಪಟ್ಟಿರುವ ಗಂಗಾ ನದಿಯು ಗಂಗೋತ್ರಿ ಹಿಮಾಲಯ ಪರ್ವತಗಳ ನಡುವಿನ ಗೌಮುಖ ಎಂಬ ಗುಹೆ ಉಗಮಿಸಿ ಭಾಗೀರಥಿಯಾಗಿ ಹೊರಹೊಮ್ಮುವುದ ಜೊತೆಗೆ ದೇವಪ್ರಯಾಗದಲ್ಲಿ ಅಲಕನಂದಾ ನದಿಯನ್ನು ಸೇರಿ ಗಂಗೆಯಾಗಿ   ಹರಿಯುತ್ತಾ ಬಂಗಾಳಕೊಲ್ಲಿಯನ್ನು ಸೇರುವ ಈ ನದಿಯು ಪಾಪಗಳನ್ನು ತೊಳೆದು,ಆತ್ಮಗಳಿಗೆ ಮೋಕ್ಷವನ್ನು ನೀಡುವುದು ಎನ್ನಲಾಗುತ್ತೆ. ಇಂತಹ ಪುಣ್ಯ ನದಿ ಹೇಗೆ ಭೂಮಿಗೆ ಬಂತು,  ಇದರ  ಹಿಂದೆ ಇದೆ ಒಂದು ದೊಡ್ಡ ದಂತಕಥೆ.

ಒಮ್ಮೆ, ಸತ್ಯಯುಗದಲ್ಲಿ ಇಕ್ಷ್ವಾಕು ವಂಶದ ರಾಜ ಸಗರನು ಅಶ್ವಮೇಧ ಯಜ್ಞವನ್ನು ನಡೆಸುತ್ತಿದ್ದ. ಅದು ಇಂದ್ರನ ಸಿಂಹಾಸನವನ್ನು ಕೂಡ ಅಲ್ಲಾಡಿಸುವಷ್ಟು ಶಕ್ತಿಶಾಲಿ ಯಜ್ಞವದ್ದರಿಂದ  ಇಂದ್ರನು ಯಜ್ಞದ ಕುದುರೆಯನ್ನು ಕದ್ದೊಯ್ದು ಕಪಿಲ ಮುನಿಯ ಆಶ್ರಮದಲ್ಲಿ ಅಡಗಿಸಿಟ್ಟನು. ಇದನ್ನರಿಯಾದ ಸಗರನು ಕುದುರೆಯನ್ನು ಹುಡುಕಿ ತರಲು ತನ್ನ 60,000 ಪುತ್ರರನ್ನು ಕಳಿಸಲು. ಅವರು ಕುದುರೆಯನ್ನು ಪಾತಾಳದಲ್ಲಿ ಕಪಿಲ ಮುನಿಯ ಆಶ್ರಮದ ಬಳಿ ಕಂಡರು. ಕಪಿಲ ಮುನಿಯೇ ಕುದುರೆಯನ್ನು ಕದ್ದಿದ್ದಾನೆಂದು ಭಾವಿಸಿ ಅವರನ್ನು ಅವಮಾನಿಸಲು. ತಮ್ಮ ತಪಸ್ಸಿಗೆ ಭಂಗ ಬಂದಿದ್ದರಿಂದ ಕೋಪಗೊಂಡ ಕಪಿಲರು ತನ್ನ ತಪೋಶಕ್ತಿಯಿಂದ ಅವರೆಲ್ಲರನ್ನು ಸುಟ್ಟು ಭಸ್ಮ ಮಾಡಿದರು, ಕ್ಷಣಾರ್ಧದಲ್ಲಿ ಅವರು ಬೂದಿಯ ರಾಶಿಯಾದರು.  ಅವರ ಹಿಂದೆಯೇ, ಸಗರನು ಕುದುರೆಯನ್ನು ಮರಳಿ ತರಲು ತನ್ನ ಮೊಮ್ಮಗ ಅಂಶುಮಾನನನ್ನು ಕಳುಹಿಸಿದನು. ತನ್ನ ಚಿಕ್ಕಪ್ಪಂದಿರ ಮಾರ್ಗವನ್ನು ಅನುಸರಿಸಿ ಶೀಘ್ರದಲ್ಲೇ ಕಪಿಲ ಮುನಿಯ ಆಶ್ರಮವನ್ನು ತಲುಪಿದ ಅಂಶುಮಾನನು ತನ್ನ ಚಿಕ್ಕಪ್ಪಂದಿರ ಚಿತಾಭಸ್ಮವನ್ನು ಕಂಡು ದುಂಖದಿಂದ ಅಳಲು ಪ್ರಾರಂಭಿಸಿದನು. ಅವನು ಕಪಿಲ ಮುನಿಯನ್ನು ತನ್ನ  ಚಿಕ್ಕಪ್ಪಂದಿರ ಆತ್ಮಕ್ಕೆ ಮುಕ್ತಿ ನೀಡಿ ಅವರನ್ನು ಸ್ವರ್ಗಕ್ಕೆ ಏರಿಸಲು ಪ್ರಾರ್ಥಿಸಲು. ಕಪಿಲ ಮುನಿಯು ಶಾಪದ ಪ್ರತಿಯಾಗಿ ಪರಿಹಾರವನ್ನು ನೀಡಿದರು. ಅದುವೇ ಸದ್ಗತಿ ಸಿಗಬೇಕಾದರೆ,”ಗಂಗಾ ನದಿ ಪ್ರಸ್ತುತ ಸ್ವರ್ಗದಲ್ಲಿದೆ. ನೀವು ಗಂಗಾ ನದಿಯನ್ನು ಭೂಮಿಗೆ ತರಬೇಕು. ಈ ಪವಿತ್ರ ನದಿ ನಿಮ್ಮ ಚಿಕ್ಕಪ್ಪಂದಿರ ಚಿತಾಭಸ್ಮವನ್ನು ಮುಟ್ಟಿದಾಗ, ಅವರು ಮುಕ್ತರಾಗುತ್ತಾರೆ.” ಎಂದು ತಿಸಿದರು.

ಕುದುರೆಯನ್ನು ತೆಗೆದುಕೊಂಡು ಅರಮನೆಗೆ ಹಿಂತಿರುಗಿದ ಅಂಶುಮಾನ್, ನಡೆದ ವಿಷಯವನ್ನೆಲ್ಲ  ಸಗರನಿಗೆ ಹೇಳಿದನು. ಸಗರನು ತನ್ನ ನಂತರ ರಾಜನಾದ ಅಂಶುಮಾನ್ನಿಗೆ ಗಂಗೆಯನ್ನು ಭೂಮಿಗೆ ತರುವ ಮಹತ್ತರ ಜವಾಬ್ದಾರಿಯನ್ನು ವಹಿಸಿದನು.”

ಅಂಶುಮಾನನು ಜೀವನಪೂರ್ತಿ ಪ್ರಯತ್ನಿಸಿದರೂ ಗಂಗೆಯನ್ನು ಭೂಮಿಗೆ ತರಲು ವಿಫಲನಾದನು. ಅವನ ನಂತರ, ಆತನ ಮಗ ದಿಲೀಪನೂ ಕೂಡ ಈ ಕೆಲಸವನ್ನು ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ. ಸಾಯುವ ಮೊದಲು, ದಿಲೀಪನು ತನ್ನ ಮಗ ಭಗೀರಥನಿಗೆ, ‘ನಾನು ಪೂರ್ಣಗೊಳಿಸಲು ವಿಫಲವಾದ ಈ ಕಾರ್ಯವನ್ನು ನೀನು ಪೂರ್ಣಗೊಳಿಸಬೇಕು’ ಎಂದು ಹೇಳಿದನು. ತನ್ನ ಪೂರ್ವಜರ ಆತ್ಮಗಳಿಗೆ ಮೋಕ್ಷ ನೀಡಬೇಕೆಂಬ ಸಂಕಲ್ಪದಿಂದ ಪ್ರೇರಿತನಾದ  ಭಗೀರಥನು,  ನಾನು ಗಂಗಾ ನದಿಯನ್ನು ಭೂಮಿಗೆ ತರುವವರೆಗೆ ರಾಜಾ ಸಿಂಹಾಸನವನ್ನು ಏರುವುದಿಲ್ಲ” ಎಂದು ಪ್ರತಿಜ್ಞೆ ಮಾಡಿ ಕಾಡಿಗೆ ಹೊರಟು ವರ್ಷಗಳ ಕಾಲ ತಪಸ್ಸು ಮಾಡಿ ಬ್ರಹ್ಮನಲ್ಲಿ ಬೇಡಿಕೊಂಡನು, ಅಂತಿಮವಾಗಿ ಬಹ್ಮದೇವನು ದೈವಿಕ ನದಿಯನ್ನು ಸ್ವರ್ಗದಿಂದ ಭುವಿಗೆ ಕಳುಹಿಸಲು ಒಪ್ಪಿ ಸ್ವರ್ಗೀಯ ನಿವಾಸದಿಂದ ಬಿಡುಗಡೆ ಮಾಡಿದನು. ಅದರೇ ಭೂಮಿಯು ಅವಳ ಪೂರ್ಣ ಶಕ್ತಿಯನ್ನು ತಡೆದುಕೊಳ್ಳಲು ಸಾಧ್ಯವಾಗದ ಕಾರಣ ಭಗೀರಥನು ಶಿವನನ್ನು ಗಂಗೆಯ ಬಲವನ್ನು ನಿಯಂತ್ರಿಸುವಂತೆ ಶಿವನ ಮೊರೆಹೋದ ಭಗೀರಥನ ತಪಸ್ಸಿನಿಂದ ಪ್ರಭಾವಿತನಾದ ಶಿವನು, ಗಂಗೆಯ ಹರಿವನ್ನು ತನ್ನ ಕೂದಲಿನಲ್ಲಿ ಹಿಡಿದು, ತನ್ನ ಜಡೆಯ ಸುರುಳಿಗಳಲ್ಲಿ ಬಂಧಿಸಿ, ಅವಳು ಶಾಂತವಾದ ನಂತರ ಒಂದು ಸಣ್ಣ ಹನಿ ಮಾತ್ರ ಭೂಮಿಗೆ ಹರಿಯಲು ಬಿಟ್ಟನು. ಶಿವನ ಜಟೆಯಿಂದ ಧರೆಗೆ ಇಳಿದ ಗಂಗೆಯು, ರಭಸದಿಂದ ಗುಡ್ಡ ಕಾಡುಗಳಲ್ಲಿರುವ ಗಿಡಮರಗಳನ್ನು,ಬಂಡೆ ಕಲ್ಲುಗಳನ್ನು ಬದಿಗೋತ್ತುತ್ತಾ ಭಗೀರಥನನ್ನು ಅನುಸರಿಸಿದಳು. ಮಾರ್ಗಮಧ್ಯದಲ್ಲಿ ಮಹಾ ತಪಸ್ವಿಗಳು, ಶಾಪಾನುಗ್ರಹಶಕ್ತರು ಆದ ಜಹ್ನುಋಷಿಗಳ ಆಶ್ರಮ ಬಂತು. ಗಂಗೆ ರಭಸದಿಂದ ಜಹ್ನುಋಷಿಗಳ ಆಶ್ರಮವನ್ನು ಹಾಳುಮಾಡಿದಳು. ಕೋಪತಾಪತಪ್ತರಾದ ಜಹ್ನುಋಷಿಗಳು  ತಕ್ಷಣವೇ ತಮ್ಮ ಯೋಗಶಕ್ತಿಯಿಂದ ವಿಶಾಲವಾಗಿ ಬಾಯಿತೆಗೆದು ಒಂದೇ ಗುಟುಕಿನಂತೆ ಗಂಗೆಯನ್ನು ಕುಡಿದುಬಿಟ್ಟರು. ಇದನ್ನು ಗಮನಿಸದ ಭಗೀರಥ ಹಿಂತಿರುಗಿ ನೋಡಿದಾಗ, ಗಂಗೆಯ ಸುಳುವೇ ಇಲ್ಲದನ್ನು ಕಂಡು.  ಭಯಭೀತನಾಗಿ ಅಗಸ್ತ್ಯರ ಬಳಿ ಬಂದ ಭಗೀರಥನಿಗೆ ಜಹ್ನುಋಷಿಗಳ ತಪ್ಪಸ್ಸಿನ ಪ್ರಭಾವದ ಪರಿಚಯವಾಯಿತು. ತನ್ನ ವೃತ್ತಾಂತವೆಲ್ಲವನ್ನು ಜಹ್ನು ಋಷಿಗಳ ಸನ್ನಿಧಿಯಲ್ಲಿ ವಿಜ್ಞಾಪಿಸಿಕೊಂಡು, ತನ್ನ ಪೂರ್ವೀಕರಿಗೋಸ್ಕರ ಪಾನಮಾಡಿದ ಗಂಗೆಯನ್ನು ಹೊರಗೆ ಬಿಟ್ಟು ಉದ್ದರಿಸಲು ಬೇಡಿದ. ಕರುಣಾಮೂರ್ತಿಗಳಾದ ಜಹ್ನುಋಷಿಗಳು ಪುಣ್ಯಾತ್ಮನಾದ, ಪಿತೃದೇವತೆಗಳಲ್ಲಿ ಶ್ರೆದ್ಧೆಯುಳ್ಲ ಭಗೀರಥನ ಪ್ರಾರ್ಥನೆಯಿಂದ ಪ್ರಸನ್ನರಾದರು. ತಮ್ಮ ತಪಶಕ್ತಿಯಿಂದ ಚುಲಕಪ್ರಾಯವಾಗಿ ಪಾನಮಾಡಿದ ಗಂಗೆಯನ್ನು ಬಲಗಿವಿಯಿಂದ ಹೊರಗೆ ಬಿಟ್ಟರು. ಜಹ್ನುಋಷಿಗಳಿಂದ ಹೊರಬಂದ ಗಂಗೆ ಅಂದಿನಿಂದ ಜಾಹ್ನವಿಯಾದಳು. ಕೃತಜ್ಞತೆಯಿಂದ ಜಹ್ನುಋಷಿಗಳಿಗೆ ಪ್ರಣಾಮಗಳನ್ನು ಸಮರ್ಪಿನಿದ ಭಗೀರಥನು ರಥಾರೂಢನಾಗಿ ಪಾತಾಳದತ್ತ ಪಯಣಿಸಿದನು. ಜಾಹ್ನವಿಯು ಪುನಃ ಭಗೀರಥನನ್ನು ಅನುಸರಿಸಿದಳು. ಕೊನೆಗೆ, ಭಗೀರಥನು ಗಂಗೆಯನ್ನು ತನ್ನ 60,000 ಪೂರ್ವಜರ ಚಿತಾಭಸ್ಮಕ್ಕೆ ಕರೆದೊಯ್ದನು. ನದಿಯ ನೀರು ಪವಿತ್ರ ನೀರು ಚಿತಾಭಸ್ಮವನ್ನು ಸ್ಪರ್ಶಿಸಿದಾಗ, ಭಗೀರಥನ ಪೂರ್ವಜರ ಆತ್ಮಗಳು ತಕ್ಷಣವೇ ಮುಕ್ತರಾಗಿ ಸ್ವರ್ಗವನ್ನು ಸೇರಿಕೊಂಡವು. ನಂತರ, ಬ್ರಹ್ಮದೇವನು ಪ್ರತ್ಯಕ್ಷನಾಗಿ, ‘ರಾಜ ಸಗರನ ಮಕ್ಕಳು ಈಗ ಸ್ವರ್ಗದಲ್ಲಿದ್ದಾರೆ. ಅವರು ಗಂಗೆಯ ಪವಿತ್ರ ನೀರಿನಿಂದ ಮುಕ್ತರಾಗಿದ್ದಾರೆ. ನೀನು ಈ ಮಹಾ ಕಾರ್ಯವನ್ನು ಸಾಧಿಸಿದಾಗಿನಿಂದ, ಗಂಗೆಯನ್ನು ‘ಭಾಗೀರಥಿ’ ಎಂದೂ ಕರೆಯಲಾಗುತ್ತದೆ’ ಎಂದು ಆಶೀರ್ವದಿಸಿದನು.”

ಹೀಗೆ ಭಗೀರಥನು ತನ್ನ ಮಹಾನ್ ಗುರಿಯನ್ನು ಸಾಧಿಸಿದನು. ಅವನ ಭಕ್ತಿ, ತ್ಯಾಗ ಮತ್ತು ನಿರ್ಧರಿತ ಪ್ರಯತ್ನದ ಫಲವಾಗಿ ದೇವನದಿ ಗಂಗಾ ಭೂಮಿಗೆ ಇಳಿದಳು. ಅಂದಿನಿಂದ, ಗಂಗೆಯು ಭಾರತದ ಜೀವನಾಡಿ, ಕೋಟಿಗಟ್ಟಲೆ ಜನರ ಪಾಪಗಳನ್ನು ತೊಳೆಯುವ ಪವಿತ್ರ ನದಿಯಾಗಿ ಹರಿಯುತ್ತಿದ್ದಾಳೆ. ಹೀಗೆ  ಭಗೀರಥನು ಕೊನೆಗೂ ತನ್ನ ಗುರಿಯನ್ನು ಸಾಧಿಸಿದನು. ಗಂಗೆ ಭೂಮಿಗೆ ಇಳಿದು ನದಿಯಾಗಿ ಹರಿದಳು ಮತ್ತು ಜನರ ಶಾಪ,ಪಾಪಗಳನ್ನು ತೆಳೆಯುತ್ತಿರುವಳು. ಇದು ಕೇವಲ ನದಿಯ ಕಥೆಯಲ್ಲ, ಇದು ತ್ಯಾಗ, ಭಕ್ತಿ ಮತ್ತು ಪರಿಶ್ರಮದ ಅಮರ ದಂತಕಥೆ.”

Leave a Comment

Your email address will not be published. Required fields are marked *

Scroll to Top