ಭಕ್ತನ ಶುದ್ಧ ಹೃದಯಕ್ಕೆ ದೇವರೇ ತಿರುಗಿದ! ಕನಕದಾಸರ ಅದ್ಭುತ ಪವಾಡದ ಕಥೆ

ಕನಕದಾಸರು ಸಾಕ್ಷಾತ್ ಭಗವಂತನೇ ಅವರೆಡೆಗೆ ತಿರುಗಿ ದರ್ಶನ ನೀಡುವಂತೆ ಮಾಡಿದ ಮಹಾನ್ ಹರಿ ಭಕ್ತರು. ಕನಕದಾಸರ ಮೂಲ ಹೆಸರು  ತಿಮ್ಮಪ್ಪ ನಾಯ್ಕ. ಕ್ರಿಸ್ತ ಶಕ 1509ರಲ್ಲಿ, ಹವೇರಿ ಜಿಲ್ಲೆಯ ಬೀರೆಗೌಡ, ಬೀಚಮ್ಮನವರ ಮಗನಾಗಿ  ಬಡ ಕುರುಬ ಕುಟುಂಬದಲ್ಲಿ ಜನಿಸಿದ ಅವರು ಬಾಲ್ಯದಲ್ಲಿ ಧೈರ್ಯಶಾಲಿ ಯೋಧನಾಗಿದ್ದರು, ಮತ್ತು ರಾಜ್ಯದ ಸೇನೆಯಲ್ಲಿ ಸೇವೆ ಮಾಡುತ್ತಿದ್ದು, ತಮ್ಮ ಪ್ರದೇಶದ (ಸೈನಿಕ ಮುಖ್ಯಸ್ಥ) ದಂಡನಾಯಕರಾಗಿದ್ದರು. ಒಮ್ಮೆ, ಯುದ್ಧದಲ್ಲಿ ತೀವ್ರ ಗಾಯಗೊಂಡಾಗ, ಜೀವನದ ಅರ್ಥವನ್ನು ಅರಿತು, ಅವರ ಮನಸ್ಸು ಭಗವಂತನ ಕಡೆ ತಿರುಗಿತು. ಅಂದಿನಿಂದಲೇ ಅವರು ಲೋಕತ್ಯಾಗ ಮಾಡಿ, ಭಕ್ತಿ ಮಾರ್ಗಕ್ಕೆ ಕಾಲಿಟ್ಟರು. 

ಇವರಿಗೆ ಕನಕದಾಸ ಎಂಬ ಹೆಸರು ಹೇಗೆ ಬಂತು?. ಕನಕದಾರರೆಂಬ ಹೆಸರು ಬಂದಿದ್ದು ಕೂಡ ಒಂದು ಅದ್ಬುತ ಅಂತಾನೆ ಹೇಳಬಹುದು. ಅವರಿಗೆ ಅಕಸ್ಮಾತ್ತಾಗಿ ಸಿಕ್ಕ ರತ್ನಾಕನಕಗಳ ಚಿನ್ನದ ನಿಧಿಯಿಂದ (ಕನಕದಿಂದ) ವೈರಾಗ್ಯ ಹೊಂದಿ, ಆ ಸಂಪತ್ತನ್ನು ದಾನ ಮಾಡಿ ಹರಿದಾಸರಾಗಲು ನಿರ್ಧರಿಸಿದರು. ಇದರ ನಂತರವೇ ಅವರು ರತ್ನ, ಕನಕವನ್ನು ದಾನ ಮಾಡಿದ ಕಾರಣ ಕನಕ ಎಂದು ಮತ್ತು ಭಗವಂತನಿಗೆ ಭಕ್ತಿಯ  ದಾಸರಾದ ಕಾರಣ ದಾಸ ಎಂದು ಒಟ್ಟಾರೇ  ಕನಕದಾಸರೆಂದೇ ಪ್ರಕ್ಯತಿಯಾದರು. ಇವರು ವ್ಯಾಸರಾಯರ ಶಿಷ್ಯರಾಗಿ, ಕಾಗಿನೆಲೆ ಆದಿಕೇಶವರಾಯನ ಪರಮ ಭಕ್ತರಾದರು.

ಒಂದು ದಿನ, ಕನಕದಾಸರು ಉಡುಪಿ ಶ್ರೀಕೃಷ್ಣನ ದರ್ಶನಕ್ಕಾಗಿ ಹೊರಟರು. ಆದರೆ ಆ ಕಾಲದಲ್ಲಿ ದೇವಸ್ಥಾನದಲ್ಲಿ ಕೆಲವು ಜನರಿಗೆ ಮಾತ್ರ ಪ್ರವೇಶವಿತ್ತು. ಅವರು ತೊಟ್ಟಿದ್ದ ವಸ್ರ್ತ ನೋಡಿ  ಕೆಳಜಾತಿಗೆ ಸೇರಿದವರು ಎಂದು ತಿಳಿದು ಅವರನ್ನು ಮುಖ್ಯ ದ್ವಾರದಿಂದ ಪ್ರವೇಶಿಸಲು ಮತ್ತು ಶ್ರೀಕೃಷ್ಣನ ದರ್ಶನ ಮಾಡಲು ಅಲ್ಲಿನ ಅರ್ಚಕರು ಅವಕಾಶ ನೀಡಲ್ಲ. ಕನಕದಾಸರು ಭಕ್ತಿಪರವಶರಾಗಿ, ದೇವಾಲಯದ ಹಿಂಭಾಗದ ಗೋಡೆಯ ಹೊರಗೆ ನಿಂತು, ಅವರು ಭಗವಂತನನ್ನು ಪ್ರಾರ್ಥಿಸಿದರು —“ನಾನು ನಿನ್ನ ದರ್ಶನಕ್ಕಾಗಿ ಬಂದಿದ್ದೇನೆ ಕೃಷ್ಣಾ, ಜಾತಿಯ ಅಂತರದಿಂದ ನನ್ನನ್ನು ದೂರ ಮಾಡಬೇಡ!” ಎಂದು ಏಕಾಗ್ರಚಿತ್ತನಾಗಿ ಭಗವಂತನನ್ನು ಸ್ತುತಿಸ್ತಾರೆ. ಆ ಕ್ಷಣದಲ್ಲೇ ಅದ್ಭುತ ಪವಾಡ ಸಂಭವಿಸಿತು! ಗೋಡೆಯಲ್ಲಿ ಸಣ್ಣ ರಂಧ್ರವೊಂದನ್ನು ಮಾಡಿದಂತಾಯಿತು , ಉಡುಪಿ ಶ್ರೀಕೃಷ್ಣನ ವಿಗ್ರಹವು ಹಿಂದಿರುಗಿ ಪಶ್ಚಿಮಕ್ಕೆ ಮುಖಮಾಡಿ,. ಕಿಂಡಿಯ ಮೂಲಕ ಕನಕದಾಸರಿಗೆ ದರ್ಶನ ದೊರಕಿತು! ಕೃಷ್ಣನು ತನ್ನ ಜಾತಿ, ಕುಲವನ್ನು ಲೆಕ್ಕಿಸದೆ ನಿಜವಾದ ಭಕ್ತನಿಗಾಗಿ ತಿರುಗಿದ. ಅದೇ ‘ಕನಕ ಕಿಂಡಿ’ ಎಂದೇ ಪ್ರಸಿದ್ಧವಾದ ಪವಿತ್ರ ಸ್ಥಳ. ಈ ಸ್ಥಳವನ್ನು ಈಗ ‘ಕನಕನ ಕಿಂಡಿ’ ಎಂದು ಕರೆಯಲಾಗುತ್ತದೆ. ಈ ರೀತಿಯಾಗಿ ಕನಕದಾಸರು   ಭಕ್ತಿಯ ಶಕ್ತಿಯನ್ನು ಪ್ರಪಂಚಕ್ಕೆ ಸಾರಿದ್ದಾರೆ.

ಕನಕದಾಸರು ಕೇವಲ ಭಕ್ತನೇ ಅಲ್ಲ, ಅವರು ಒಬ್ಬ ತತ್ವಜ್ಞಾನಿ ಮತ್ತು ಕವಿಯೂ ಹೌದು.

ಅವರ ಪ್ರಮುಖ ಕೃತಿಗಳಾದ ಮೋಹನ ತಾರಂಗಿಣಿ,  ರಮಾಧನ್ಯ ಚರಿತೆ, ನಳಚರಿತ್ರೆ, ಹರಿಭಕ್ತಿ ಸಾರ  ಇತ್ಯಾದಿ. ಜೊತೆಗೆ ಅವರ “ಕುಲ ಕುಲ ಕುಲವೆಂದು ಹೊಡೆದಾಡದಿರಿ” ಮತ್ತು “ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೇ” ಮುಂತಾದ ಅವರ ಕೃತಿಗಳು ಸಾಮಾಜಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಹೊಂದಿವೆ.

ಅವರ ಪದ್ಯಗಳಲ್ಲಿ ಭಕ್ತಿ, ಜ್ಞಾನ ಮತ್ತು ಮಾನವೀಯ ಮೌಲ್ಯಗಳ ಸುಗಂಧ ತುಂಬಿದ್ದು. ಸಾಮಾಜಿಕ ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧ್ವನಿ ಎತ್ತಿದರು.

ಅವರು ಹೇಳುತ್ತಾರೆ — ಜಾತಿ ಬೇಧವಿಲ್ಲದೆ, ಭಗವಂತನ ನಾಮ ಸ್ಮರಣೆ ಮಾಡಿದವನೇ ನಿಜವಾದ ಭಕ್ತ.” ಎಂದು

ಅವರ ಮಹಾನ್ ಕೊಡುಗೆಗಳನ್ನು, ಸಾಮಾಜಿಕ ಸುಧಾರಣಾ ಮನೋಭಾವವನ್ನು ಮತ್ತು ಭಕ್ತಿ ಮಾರ್ಗವನ್ನು ಸ್ಮರಿಸುವ ಸಲುವಾಗಿ ಕನಕದಾಸರ ಜಯಂತಿಯನ್ನು ಆಚರಿಸಲಾಗುತ್ತದೆ. ಕರ್ನಾಟಕ ಸರ್ಕಾರವು 2008 ರಿಂದ ಕನಕದಾಸ ಜಯಂತಿಯಂದು ಸಾರ್ವಜನಿಕ ರಜೆಯನ್ನು ಘೋಷಿಸಿ, ರಾಜ್ಯಾದ್ಯಂತ ಈ ಆಚರಣೆಗೆ ಗೌರವ ನೀಡಿದೆ.

Leave a Comment

Your email address will not be published. Required fields are marked *

Scroll to Top