ರಾಯರ ಪಂಚಾವತಾರ ರಹಸ್ಯ! | Shankukarna to Raghavendra – The Untold Divine Journey 🙏

ನಮಸ್ಕಾರ! ಶ್ರೀ ರಾಘವೇಂದ್ರ ಸ್ವಾಮಿಗಳು ಕಲಿಯುಗದ ಕಲ್ಪವೃಕ್ಷ ಮತ್ತು ಕಾಮಧೇನು. ಇಂದಿಗೂ ಮಂತ್ರಾಲಯದಲ್ಲಿ ಸಜೀವ ಬೃಂದಾವನದ ಮೂಲಕ ಭಕ್ತರನ್ನು ಕಾಯುತ್ತಿರುವ ರಾಯರ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಈ ಮಹಾ ಯತಿ ತಮ್ಮ ಸನ್ಯಾಸಕ್ಕಿಂತ ಮೊದಲು ನಾಲ್ಕು ರೂಪಗಳಲ್ಲಿ ಅವತರಿಸಿದ್ದರು ಎಂಬುದು ನಿಮಗೆ ತಿಳಿದಿದೆಯೇ? ಬನ್ನಿ, ನೋಡೋಣ ರಾಯರ ಪಂಚಾವತಾರಗಳು ಯಾವು ಮತ್ತು ಅವುಗಳ ಮಹತ್ವ ಏನು ಎಂದು.

  1. ಶಂಖುಕರ್ಣ (ರಾಯರ ಮೂಲ ರೂಪ):

ಇವರು ಬ್ರಹ್ಮದೇವರ ಸಭೆಯಲ್ಲಿ ದೇವತಾ ಪೂಜೆಗೆ ಪುಷ್ಪಗಳನ್ನು ತರುವ ಕರ್ಮಜ ದೇವತೆ. ದೇವತಾ ಪೂಜೆಗೆ ಹೂವುಗಳನ್ನು ತರುವಲ್ಲಿ ತಡವಾದ ಕಾರಣ, ಬ್ರಹ್ಮದೇವರು ಭೂಮಿಯಲ್ಲಿ ಜನ್ಮ ತಾಳಿ ಭಗವಂತನ ಸೇವೆ ಮಾಡು! ಎಂದು ಶಾಪ ನೀಡಿದರು. ಈ ಶಾಪವೇ ರಾಯರ ದಿವ್ಯ ಪಯಣದ ಆರಂಭ.

  1. ಪ್ರಹ್ಲಾದ ರಾಜರು:

ಅಸುರ ರಾಜ ಹಿರಣ್ಯಕಶಿಪುವಿನ ಮಗನಾಗಿ, ವಿಷ್ಣುವಿನ ಪರಮ ಭಕ್ತನಾಗಿ. ಈ ರೂಪದಲ್ಲಿ ಅವರು ಸತ್ಯ, ನಂಬಿಕೆ ಮತ್ತು ನಿಜವಾದ ಭಕ್ತಿ ಶ್ರೇಷ್ಠತೆಯನ್ನು ಜಗತ್ತಿಗೆ ತೋರಿಸಿದರು ಮತ್ತು ನರಸಿಂಹ ದೇವರ ಅನುಗ್ರಹಕ್ಕೆ ಪಾತ್ರರಾದರು.

  1. ಭಾಹ್ಲಿಕ ರಾಜರು:

ಮಹಾಭಾರತ ಕಾಲದಲ್ಲಿ ಕೌರವರ ಪರವಾಗಿದ್ದರೂ, ಶ್ರೀಕೃಷ್ಣನ ಭಕ್ತರಾಗಿ.  ಕೌರವರ ಸಹವಾಸದಿಂದಾದ ಪಾಪವನ್ನು ಕಳೆಯಲು, ಈ ಅವತಾರದಲ್ಲಿ ವಾಯುದೇವರ (ಭೀಮಸೇನನ) ದರ್ಶನಕ್ಕಾಗಿ ತಪಸ್ಸು ಮಾಡಿದರು. ಭೀಮಸೇನನ ದರ್ಶನ ಪಡೆಯುವ ಆಸೆಯಿಂದ ಜೀವನ ಮುಗಿಸಿದರು. ಅವರ ಈ ಅವತಾರ ತಪಸ್ಸು ಮತ್ತು ಪ್ರಾಯಶ್ಚಿತ್ತದ ಮಹತ್ವವನ್ನು ತೋರಿಸುತ್ತದೆ.

  1. ವ್ಯಾಸರಾಜರು (ವ್ಯಾಸತೀರ್ಥರು):

ಶ್ರೀ ಮಧ್ವಾಚಾರ್ಯರ ಪರಂಪರೆಯಲ್ಲಿ ಶ್ರೇಷ್ಠ ಯತಿ. ಕಲಿಯುಗದಲ್ಲಿ ದ್ವೈತ ಸಿದ್ಧಾಂತವನ್ನು ಪ್ರಚಾರ ಮಾಡಲು, ಅನೇಕ ಗ್ರಂಥಗಳನ್ನು ರಚಿಸಲು ಮತ್ತು ವಿಜಯನಗರ ಸಾಮ್ರಾಜ್ಯದ ರಕ್ಷಣೆಗೆ ನಿಂತರು. ಹರಿದಾಸ ಸಾಹಿತ್ಯಕ್ಕೆ ದೊಡ್ಡ ಕೊಡುಗೆ ನೀಡಿದರು. ವ್ಯಾಸರಾಜರ  ಈ ಅವತಾರ  ಜ್ಞಾನ ಮತ್ತು ಭಕ್ತಿಯ ಸಮನ್ವಯದ ರೂಪ.

  1. ಶ್ರೀ ರಾಘವೇಂದ್ರ ಸ್ವಾಮಿಗಳು (ವೆಂಕಟನಾಥ):

 ಶಾಪದಿಂದ ಮುಕ್ತಿ ಪಡೆದ ಅಂತಿಮ ಮತ್ತು ಅತ್ಯಂತ ಪ್ರಸಿದ್ಧ ಅವತಾರ. ಮಧ್ವ ಪರಂಪರೆಯ ಪ್ರಸಿದ್ಧ ಯತಿ. ದ್ವೈತ ಸಿದ್ಧಾಂತದ ಆಧಾರಸ್ತಂಭ. ವ್ಯಾಸರಾಜರ ಕಾರ್ಯವನ್ನು ಮುಂದುವರೆಸಿ, ಗ್ರಂಥಗಳನ್ನು ರಚಿಸಿ, ಧರ್ಮವನ್ನು ಸ್ಥಾಪಿಸಿ, ಭಕ್ತರ ರಕ್ಷಣೆಯೇ ಅವರ ಜೀವನದ ಧ್ಯೇಯವಾಗಿತ್ತು. ೭೦೦ ವರ್ಷಗಳ ಕಾಲ ಬೃಂದಾವನದಲ್ಲಿ ಸನ್ನಿಹಿತರಾಗಿ ಭಕ್ತರನ್ನು ಕಾಯುವ ಸಂಕಲ್ಪ ಮಾಡಿದರು. ಈ ಮಾತು ಇಂದು ಸಹ ಮಂತ್ರಾಲಯದಲ್ಲಿ ನಿಜವಾಗಿದೆ.

 ಹೀಗೆ, ಶಂಖುಕರ್ಣರಾಗಿ ಆರಂಭವಾದ ದಿವ್ಯ ಜೀವಿಯ ಪಯಣವು, ಪ್ರಹ್ಲಾದಭಕ್ತಿ , ಭಾಹ್ಲಿಕ ರಾಜರ ತಪಸ್ಸು ಮತ್ತು ವ್ಯಾಸರಾಜ ಜ್ಞಾನ ಮಾರ್ಗಗಳ ಮೂಲಕ ನಡೆದು, ಅಂತಿಮವಾಗಿ ಕರುಣಾಮಯಿ ಶ್ರೀ ರಾಘವೇಂದ್ರರಾಗಿ ಕೊನೆಗೊಂಡಿತು. ಅವರ ಬೃಂದಾವನ ಪ್ರವೇಶವು ಕೇವಲ ಅಂತ್ಯವಲ್ಲ, ಅದು ನಮ್ಮೆಲ್ಲರಿಗೂ ಆಶೀರ್ವಾದ ನೀಡುವ ಒಂದು ಹೊಸ ಆರಂಭ!

ನೀವು ರಾಯರಿದ್ದಾರೆ ಎಂಬುದನ್ನು ನಂಬುದಾದರೆ “ಓಂ ರಾಘವೇಂದ್ರಾಯ ನಮಃ!” ಎಂದು ಕಾಮೆಂಟ್ ಮಾಡಿ.                 

                                                          ಧನ್ಯವಾದಗಳು

Leave a Comment

Your email address will not be published. Required fields are marked *

Scroll to Top