
ಜ್ಞಾನ, ಸಂಪತ್ತು ಮತ್ತು ಶುದ್ಧತೆಯ ಪ್ರತೀಕರಾಗಿದ್ದ ಲಕ್ಷ್ಮೀ, ಸರಸ್ವತಿ, ಹಾಗೂ ಗಂಗೆ ಭಗವಾನ್ ಶ್ರೀ ವಿಷ್ಣುವಿನ ಶಾಶ್ವತ ಸಹಚರಿಣಿಯರು. ಒಮ್ಮೆ ಭಗವಂತನಾದ ವಿಷ್ಣುವು ಗಂಗೆಯನ್ನೇ ಜಾಸ್ತಿ ಪ್ರೀತಿಸುತ್ತಾನೆ ಅಂತ ಅನುಮಾನಿಸಿದ ಸರಸ್ವತಿಗೆ ಇರ್ಷೆ ಉಂಟಾಗಿ ಗಂಗೆಯೊಡನೆ ತುಂಬ ಕಟೋರವಾಗಿ ನಡೆದುಕೊಳ್ಳುತ್ತಾಳೆ. ಶಾಂತಿ ಮತ್ತು ಸಹಾನುಭೂತಿಯ ಪ್ರತಿರೂಪವಾದ ಲಕ್ಷ್ಮಿ ಮಧ್ಯ ಪ್ರವೇಶಿಸಿ ಇಬ್ಬರನ್ನೂ ಸಮಾಧಾನಪಡಿಸಲು ಪ್ರಯತ್ನಿಸಿದಗ. ಲಕ್ಷ್ಮೀ ಗಂಗೆಯ ಪಕ್ಷವನ್ನೇ ವಹಿಸುತ್ತಿದ್ದಾಳೆ ಎಂದು ಅಪಾರ್ಥ ಮಾಡಿಕೊಳ್ಳುವ ಸರಸ್ವತಿ ಲಕ್ಷ್ಮೀ ನೀನು ಭೂಮಿಯಲ್ಲಿ ಜನ್ಮ ತಾಳಿ, ಒಂದು ನದಿಯಾಗಿ ಮತ್ತು ಗಿಡವಾಗಿ ಕಾಣಿಸು ಅಂತ ಶಪಿಸಿ ಬಿಡ್ತಾಳೆ. ಇದನ್ನು ನೋಡಿದ ಗಂಗೆ ಕೋಪಗೊಂಡು ನನ್ನ ಸಹೋದರಿಯನ್ನ ಶಾಪಿದ ನೀನು ಕೂಡ ಒಂದು ನದಿಯಾಗಿ ಪಾಪಿಗಳು ವಾಸಿಸುವ ಭೂಲೋಕಕ್ಕೆ ತೆರಳು ಎಂದು ಶಾಪ ನೀಡ್ತಾಳೆ . ಮತ್ತೇ ತಕ್ಷಣವೇ ಸರಸ್ವತಿ ನೀನು ಸಹ ಭೂಲೋಕಕ್ಕೆ ನದಿಯಾಗಿ ಹೋಗಿ ಅಲ್ಲಿ ಎಲ್ಲಾರ ಪಾಪಗಳನ್ನು ಹೊರಬೇಕು ಅಂತ ಗಂಗೆಯನ್ನ ಶಾಪಿಸಿ ಬಿಡ್ತಾಳೆ.
ಹೀಗೆ ಅನಗತ್ಯವಾದ ಕ್ಷುಲ್ಲಕ ಜಗಳವೂ ಶಾಪದಿಂದ ಕೊನೆಗೊಂಡಿದನ್ನು ಕಂಡ ಶ್ರೀ ಮಹಾವಿಷ್ಣುವು ತನ್ನ ಮೂವರು ಸಹಚರಿಣಿರನ್ನು ಮಮತೆಯಿಂದ ಸಂತೈಸುತ್ತಾ
ಲಕ್ಷ್ಮೀಯನ್ನು ನೀನು ಮಹತಪಸ್ವಿ ಧರ್ಮಧ್ವಜನೆಂಬ ರಾಜನ ಮನೆಯಲ್ಲಿ ಜನಿಸಿ ,ಮೂರು ಲೋಕಗಳನ್ನು ಪಾವನಗೊಳಿಸಿದ ಬಳಿಕ ಪರಿಶುದ್ಧವಾದ ತುಳಸಿ ಗಿಡವಾಗಿ ಹುಟ್ಟಿ ಪೂಜಿಸಲ್ಪಡುತ್ತೀಯಾ.ಸಮಯಾನಂತರ ತನ್ನದೇ ಬಾಗದಿಂದಲೇ ಪ್ರಕಟವಾಗುವ ಶಂಕಚೂಡ ಎಂಬ ರಾಕ್ಷಸನ ಸತಿಯಾಗಿ ಗಂಡಕಿ ನದಿಯಾಗಿ ಹರಿದು,
ಆ ಬಳಿಕ ಮತ್ತೆ ವೈಕುಂಠಕ್ಕೆ ಮರಳಿ ನನ್ನ ಪತ್ನಿಯಾಗುವೆ.
ಎರಡನೆಯದಾಗಿ ಸರಸ್ವತಿಯು ಜ್ಞಾನ, ವಾಕ್ಶಕ್ತಿ ಮತ್ತು ಶುದ್ಧತೆಯ ರೂಪವಾಗಿ ನದಿಯಾಗಿ ಅವತರಿಸಿ. ಅವಳು ಬ್ರಹ್ಮನ (ಶಕ್ತಿಸ್ವರೂಪಿಣಿ) ಆಗಿ, ಅವನ ಮಡದಿಯಾಗಿ ಹೋಗ್ತಾಳೆ.
ಇನ್ನೂ ಗಂಗೆಯು ಭಗೀರಥನ ತಪಸ್ಸಿನಂತೆ ಪಾಪಗಳನ್ನು ತೊಳೆದು ಮೋಕ್ಷವನು ಕಲ್ಪಿಸಲು ಭಾಗೀರತಿಯಾಗಿ ಭೂಮಿಗೆ ಇಳಿಯುವುದರ ಜೊತೆಗೆ ಶಿವನ ಸಹಚರಿಣಿಯಾಗುತ್ತಾಳೆ.
ಹೀಗೆ, ಮೂರೂ ದೇವಿಯರೂ ತಮ್ಮ ಶಾಪವನ್ನು ಆಶೀರ್ವಾದವನ್ನಾಗಿ ಪರಿವರ್ತಿಸಿಕೊಂಡರು. ಅವರಿಂದಲೇ ಮೂಡಿ ಬಂದವು
ಲಕ್ಷ್ಮಿಯ ಧರ್ಮಶುದ್ಧತೆ, ಸರಸ್ವತಿಯ ಜ್ಞಾನಪ್ರವಾಹ ಮತ್ತು ಗಂಗೆಯ ಪವಿತ್ರತೆ.
