
ಭಗವಂತನಿಗೂ ಕೂಡ ವಿಶ್ರಾಂತಿಯ ಅವಶ್ಯಕತೆ ಬಂತ, ಅದಕ್ಕಗಿಯೇ ಅವಧಿಯನ್ನೂ ಕೂಡ ನಿಗದಿ ಮಾಡಿದ್ರ, ಯಾಕೀರಲ್ಲಾ ಹೇಳಿ ಕಂಡಿತ ಇದೆ, ದೇವಶಯನಿ ಏಕಾದಶಿ ಇದು ಭಗವಂತನಾದ ವಿಷ್ಣುವು ಯೋಗನಿದ್ರೆಗೆ ಜಾರುವ ಸಮಯ ಅಂತಾನೇ ಹೇಳಲಗತ್ತೆ, ಆಷಾಢ ಮಾಸದ ಶುಕ್ಲ ಪಕ್ಷದ ಹನ್ನೊಂದನೇ ದಿನ. ಇದನ್ನು ಆಷಾಢ ಏಕಾದಶಿ, ಪ್ರಥಮ ಏಕಾದಶಿ ಅಥವಾ ಹರಿಶಯನಿ ಏಕಾದಶಿ ಎಂದೂ ಕೂಡ ಕರೆಯಾಲಾಗತ್ತೇ. ದೇವಶಯನಿ ದೇವರು ಶಯನಿಸುವುದು ಅಂದರೇ ದೇವರು ನಿದ್ರಿಸುವುದು ಎಂದರ್ಥ.
ದೇವಶಯನಿ ಏಕಾದಶಿಯಂದು ಕ್ಷೀರಸಾಗರದಲ್ಲಿ ಶೇಷನಾಗನ ಮೇಲೆ ಯೋಗನಿದ್ರೆಗೆ ಜಾರಿದ ಮಹಾವಿಷ್ಣುವು, ಸರಿಯಾಗಿ ನಾಲ್ಕು ತಿಂಗಳ ನಂತರ (ಕಾರ್ತಿಕದ ‘ದೇವೋತ್ಥಾನ’ ಏಕಾದಶಿಯಂದು) ಎಚ್ಚರಗೊಳ್ಳುತ್ತಾನೆ ಎಂಬುದು ಪುರಾಣಗಳ ನಂಬಿಕೆ.
‘ದೇವೋತ್ಥಾನ’ ಎಂದರೆ ‘ದೇವನನ್ನು ಎಬ್ಬಿಸುವುದು’ ಎಂದರ್ಥ. ಎಚ್ಚರಗೊಂಡ ಭಗವಂತ ಶ್ರೀ ವಿಷ್ಣುವು ಸೃಷ್ಠಿಕರ್ತನಾಗಿ ಮತ್ತೇ ಸೃಷ್ಠಿಯ ಜವಬ್ದಾರಿಯನ್ನು ನಿಭಾಯಿಸಲು ಆರಂಭಿಸಿದ ದಿನ ಕೂಡ ಹೌದು. ಈ ಬಾರಿಯ ‘ದೇವೋತ್ಥಾನ’ಏಕಾದಶಿಯು ಇದೇ ಕಾರ್ತಿಕ ಮಾಸ ನವೆಂಬರ್ 1 ಶನಿವಾರ ಬಂದಿರುವುದು ತುಂಬ ವಿಶೇಷ.
ವಿಷ್ಣುವು ಯೋಗನಿದ್ರೆಗೆ ಜಾರುವುದರ ಹಿಂದೆ ಒಂದು ಕಥೆಯೇ ಇದೆ. ಅದರ ಬಗ್ಗೆನೂ ಸ್ವಲ್ಪ ತಿಳಿದುಕೊಳ್ಳೋಣ.
ಒಮ್ಮೆ, ಲಕ್ಷ್ಮೀದೇವಿ ಭಗವಾನ್ ವಿಷ್ಣುವು ವರ್ಷವಿಡೀ ವಿರಾಮವಿಲ್ಲದೆ ಸೃಷ್ಟಿಯ ಕೆಲಸವನ್ನು ನಿರ್ವಹಿಸುವುದನ್ನು ನೋಡಿ ಆತನಿಗೆ ವಿಶ್ರಾಂತಿಯ ಅಗತ್ಯವಿದೆ ಎಂದರಿತ ಲಕ್ಷ್ಮಿ. ಪ್ರಭು, ನೀವು ನಿರಂತರವಾಗಿ ಜಾಗೃತರಾಗಿರುವುದರಿಂದ ನಿಮಗೆ ವಿರಾಮ ಸಿಗುತ್ತಿಲ್ಲ. ಆದ್ದರಿಂದ, ನೀವು ನಿಯಮಿತವಾಗಿ ನಿದ್ರೆಗೆ ಜಾರಬೇಕೆಂದು ವಿಷ್ಣುವಿನಲ್ಲಿ ವಿನಂತಿಸಿಕೊಳ್ತಾಳೆ. ಆಗ ವಿಷ್ಣುವು ಲಕ್ಷ್ಮಿಯ ಭಯವನ್ನು ದೂರ ಮಾಡಲು, ಲಕ್ಷ್ಮಿಯ ಕೋರಿಕೆಯ ಮೇರೆಗೆ ನಿದ್ರೆಗೆ ಹೋಗಲು ನಿರ್ಧರಿಸ್ತಾನೆ. ಆಷಾಢ ಶುಕ್ಲ ಏಕಾದಶಿಯಂದು ನಾಲ್ಕು ತಿಂಗಳ ಕಾಲ ನಿದ್ರೆಗೆ ಹೋಗಿ, ಕಾರ್ತಿಕ ಶುಕ್ಲ ಏಕಾದಶಿಯಂದು ಎಚ್ಚರಗೊಳ್ಳುತ್ತೇನೆ ಅಂತ ವಾಗ್ದಾನ ಮಾಡಿದನು.
ಕಾಲ ಕಳೆದ ನಂತರ, ವಿಷ್ಣು ವಾಮನ ಅವತಾರ ತಾಳಿದನು. ಮಹಾದಾನಿ ಬಲಿ ಚಕ್ರವರ್ತಿ ಯಜ್ಞಕ್ಕೆ ಆಗಮಿಸಿ ವಾಮನ ಅವತಾರದಲ್ಲಿ ಬಲಿಚಕ್ರವರ್ತಿಯಿಂದ ಮೂರು ಹೆಜ್ಜೆಗಳನ್ನು ದಾನವಾಗಿ ಪಡಿತಾನೆ,
ಮೊದಲ ಹೆಜ್ಜೆಯಿಂದ ಇಡೀ ಭೂಲೋಕ,
ಎರಡನೇ ಹೆಜ್ಜೆಯಿಂದ ಸ್ವರ್ಗಲೋಕವನ್ನು ಆವರಿಸಿ,
ಮೂರನೇ ಹೆಜ್ಜೆಯನ್ನು ಭಗವಂತನು ತನ್ನ ಪಾದವನ್ನು ಬಲಿಯ ಶಿರದ ಮೇಲೆ ಇಟ್ಟು, ಅವನನ್ನು ಪಾತಾಳಕ್ಕೆ ಕಳುಹಿಸಿದನು.
ಬಲಿಯ ದಾನಶೀಲತೆ ಮತ್ತು ಸತ್ಯನಿಷ್ಠೆಗೆ ಮೆಚ್ಚಿ, ಪಾತಾಳ ಲೋಕದ ರಾಜನಾಗಿ ಆಡಳಿತ ಮಾಡು.” ಎಂದು ಆರ್ಶಿವಾದಿಸಿದ ವಿಷ್ಣು, ಏನು ವರ ಬೇಕು ಕೇಳ್‌ನ್ನಲು, ಬಲಿ ವಿನಮ್ರತೆಯಿಂದ ನನಗೆ ಒಂದೇ ಆಶೆ — ನೀವು ಯಾವಾಗಲೂ ನನ್ನ ಅರಮನೆಯಲ್ಲಿ ವಾಸಿಸಬೇಕು ಮತ್ತು ನನಗೆ ನಿಮ್ಮ ಸೇವೆ ಮಾಡುವ ಅವಕಾಶವನ್ನು ಕರುಣಿಸಿ ಎಂದು ಬೇಡಿಕೊಳ್ಳುತ್ತಾನೆ. ಬಲಿಯ ಭಕ್ತಿಗೆ ಮೆಚ್ಚಿ, ಅವನ ಅರಮನೆಯಲ್ಲಿ ವಾಸಿಸುವುದಾಗಿ. ಆಷಾಢ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಶುಕ್ಲ ಏಕಾದಶಿವರೆಗೂ — ನಾಲ್ಕು ತಿಂಗಳು ಪಾತಾಳದಲ್ಲಿ ಯೋಗನಿದ್ರೆಯಲ್ಲಿ ಇರುತ್ತೆನೆಂದು ವಿಷ್ಣು ಮಾತು ನೀಡಿದ.
ಹೀಗೆ ವಿಷ್ಣು ಬಲಿಗೆ ಕೊಟ್ಟ ಮಾತು ನಿಭಾಯಿಸುವ ಸಲುವಾಗಿ ಆಷಾಢ ಏಕಾದಶಿಯಿಂದ ಪ್ರಾರಂಭವಾದ ಯೋಗನಿದ್ರೆ, ಕಾರ್ತಿಕ ಮಾಸದ ಏಕಾದಶಿ ತಲುಪಿತು. ಪ್ರಭು ಇಲ್ಲದ ವೈಕುಂಠವು ಖಾಲಿಯಾಯಿತು. ತನ್ನ ಪತಿಯಿಂದ ದೂರ ಇರಲು ಸಾದ್ಯವಾಗದ ಲಕ್ಷ್ಮಿ ದೇವಿ, ಸಾಮಾನ್ಯ ಹೆಣ್ಣಿನ ವೇಷದಲ್ಲಿ ಬಲಿಯ ಬಳಿ ಬರುತ್ತಾಳೆ. ಬಲಿ ಚಕ್ರವರ್ತಿಗೆ ರಾಖಿ ಕಟ್ಟುತ್ತಾಳೆ. ಆಶ್ಚರ್ಯಗೊಂಡ ಬಲಿ ಸಹೋದರಿ, ನಿನಗೆ ಏನು ಬೇಕು ಕೇಳು ಏನ್ನಲು, ಲಕ್ಷ್ಮಿ ದೇವಿ ನಿಜರೂಪ ತೋರಿಸಿ ನನ್ನ ಪತಿಯಾದ ವಿಷ್ಣುವು ನಿನ್ನ ಅರಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈ ಚಾತುರ್ಮಾಸ ಮುಗಿದಿದೆ. ನೀನು ನಿನ್ನ ತಂಗಿಯನ್ನು ಸಂತೋಷಪಡಿಸಲು ಬಯಸುವುದಾದರೆ, ಅವರನ್ನು ನನ್ನ ಬಳಿಗೆ ಹಿಂದಿರುಗಿಸುವ ಆಶಯ ವ್ಯಾಕ್ತ ಪಡಿಸಲು, ಲಕ್ಷೀ ದೇವಿಯ ಕೋರಿಕರಯಂತೆ ಭಗವಂತನನ್ನ ವೈಕುಂಟಕ್ಕೆ ಕಳುಹಿಸಲು ಬಲಿ ತುಂಬು ಮನಸ್ಸಿನಿಂದ ಒಪ್ಪಿಕೊಳ್ತಾನೆ. ಕಾರ್ತಿಕ ಮಾಸದ ಶುಕ್ಲ ಪಕ್ಷದ ಏಕಾದಶಿಯಂದು ಋಷಿಗಳು ಗಂಟೆಗಳನ್ನು ಬಾರಿಸಿ, ಶಂಖವನ್ನು ಊದುತ್ತಾ
“ಉತ್ತಿಷ್ಠೋ ಉತ್ತಿಷ್ಠ ಗೋವಿಂದೋ!
ಉತ್ತಿಷ್ಠ ಕಮಲಾಕಾಂತ!
ಜಗತಾಂ ಮಂಗಳಂ ಕುರು!”
ಎಂದು ಮಂತ್ರ ಹೇಳಿ ಪ್ರಾರ್ಥಿಸಿ ಪ್ರಭುವನ್ನು ಎಚ್ಚರಿಸಿದರು. ಯೋಗನಿದ್ರೆಯಿಂದ ಎಚ್ಚರಗೊಂಡ ವಿಷ್ಣುವು ಲಕ್ಷ್ಮೀ ಸಮೇತವಾಗಿ ವೈಕುಂಟಕ್ಕೆ ತೆರಳುತ್ತಾರೆ. ಭಗವಂತ ಯೋಗನಿದ್ರೆಯಿಂದ ಎಚ್ಚರವಾದ ಈ ದಿನವನ್ನು ಲಕ್ಷ್ಮಿ ದೇವಿಯು ದೇವೋತ್ಥಾನ ಏಕಾದಶಿ ಎಂದು ಹೆಸರಿಸಿದಳು. ದೇವೋತ್ಥಾನ ಅಂದರೆ “ದೇವರು ಎದ್ದ ದಿನ”!
ಹೀಗೆ, ಬಲಿ ಚಕ್ರವರ್ತಿಯ ಔದಾರ್ಯಕ್ಕೆ ಮೆಚ್ಚಿ ವಿಷ್ಣುವು ಪ್ರತಿ ವರ್ಷ ಆಷಾಢ ಶುಕ್ಲ ದೇವಶಯನಿ ಏಕಾದಶಿಯಿಂದ ಕಾರ್ತಿಕ ಶುಕ್ಲ ದೇವೋತ್ಥಾನ ಏಕಾದಶಿವರೆಗೆ ಪಾತಾಳದಲ್ಲಿ ಬಲಿಯ ಅರಮನೆಯಲ್ಲಿ ಯೋಗನಿದ್ರೆಗೆ ಜಾರುತ್ತಾನೆ. ಇದು ಕೇವಲ ನಿದ್ರೆ ಅಲ್ಲ, ಅದು ಧರ್ಮದ ಚಕ್ರದ ವಿಶ್ರಾಂತಿ — ಹೊಸ ಸೃಷ್ಟಿಯ ಪ್ರಾರಂಭ. ಮತ್ತು ಭಕ್ತಿಯ ಶಕ್ತಿ.
