ಅಮಾವಾಸ್ಯೆ-ಹುಣ್ಣಿಮೆ ಹುಟ್ಟಿದ್ದು ಹೇಗೆ ? ಕಾರ್ತಿಕ ಸೋಮವಾರದ ರಹಸ್ಯ! | ಶಿವನು ಚಂದ್ರನನ್ನು ತಲೆಯ ಮೇಲೆ ಧರಿಸಲು ಕಾರಣವೇನು?

ಅಮಾವಾಸ್ಯೆ, ಹುಣ್ಣಿಮೆ ಅಂದರೇನು ಇದಕ್ಕೂ ಕಾರ್ತಿಕ ಸೋಮವಾರಕ್ಕೂ ಏನ್ ಸಂಬಂಧ .ಕಾರ್ತಿಕ ಸೋಮವಾರ ಯಾಕಿಷ್ಟು ವಿಶೇಷ. ಕಾರ್ತಿಕ ಮಾಸ ಅಂದರೇನೆ ಹಾಗೆ ತುಂಬ ವಿಶೇಷ ಅಂತಾನೇ ಹೇಳಬಹುದು, ಸಾಮಾನ್ಯವಾಗಿ ಸೋಮವಾರವನ್ನು ಶಿವನಿಗೆ ಸಮರ್ಪಿಸಲಾಗಿದೆ. ಅದರಲ್ಲೂ, ಕಾರ್ತಿಕ ಮಾಸದ ಸೋಮವಾರದಂದು ಶಿವನನ್ನು ಪೂಜಿಸುವುದರಿಂದ ಕೋಟಿ ಸೋಮವಾರಗಳ ಪೂಜಾ ಫಲ ಸಿಗುತ್ತದೆ ಎಂಬ ನಂಬಿಕೆ ಇದೆ. ಕಾರ್ತಿಕ ಮಾಸದ ಸೋಮವಾರದಂದು ಎಲ್ಲಾ ದೇವಾಲಯಗಳು ಲಕ್ಷ ದೀಪಗಳಿಂದ ಕಂಗೊಳಿಸುತ್ತವೆ. ದೀಪಾವಳಿಯಿಂದ ಶುರುವಾದ ದೀಪಾಗಳ ಹಚ್ಚುವ ಆಚರಣೆ ಕಡೆ ಕಾರ್ತಿಕ ಸೋಮವಾರದ ದಿನದಂದು ತುಂಬ ಪುಣ್ಯ ಕ್ಷೇತ್ರಗಳು ಮತ್ತು ಎಲ್ಲಾ ಶಿವ ದೇವಾಲಯಗಳಲ್ಲಿ ಲಕ್ಷಾಂತರ ದೀಪ ಹಚ್ಚಿ ಪೂಜಿಸಲಾಗುತ್ತದೆ. ದೀಪಾರಾಧನೆಯು ಅಜ್ಞಾನದ ಕತ್ತಲೆಯನ್ನು ಹೋಗಲಾಡಿಸಿ, ಜ್ಞಾನ ಮತ್ತು ಸತ್ಯದ ಬೆಳಕನ್ನು ತರುತ್ತದೆ.

ಸೋಮ” ಎಂದರೆ ಚಂದ್ರ. ಸೋಮದೇವತೆ (ಚಂದ್ರ) ಶಿವನ ತಲೆಯ ಮೇಲೆ ಅಲಂಕಾರವಾಗಿ ಇರಲು ಕಾರಣ, ಈ ದಿನವನ್ನು ಶಿವನಿಗೆ ಅತ್ಯಂತ ಪ್ರಿಯದಿನ ಎಂದು ಪರಿಗಣಿಸಲಾಗಿದೆ.

ಶಿವಪುರಾಣದಲ್ಲಿ ಹೇಳಿದಂತೆ, ಚಂದ್ರ ದೇವನು ದಕ್ಷ ಪ್ರಜಾಪತಿಯ 27 ಪುತ್ರಿಯರನ್ನು ಮದುವೆಯಾದನು. ಆದರೆ ಅವನು ರೋಹಿಣಿಯನ್ನೇ ಹೆಚ್ಚು ಪ್ರೀತಿಸಿದನು. ಇದರಿಂದ ಬೇಸರಗೊಂಡ ಇತರ ಹೆಂಡತಿಯರು ದಕ್ಷನಲ್ಲಿ ತಮ್ಮ ಬೇಸರ ವ್ಯಕ್ತಪಡಿಸ್ತಾರೆ. ಕೋಪಗೊಂಡ ದಕ್ಷ ನಿನ್ನ ಕಿರಣಗಳು ಕ್ಷಯಿಸಲಿ!ಕಳೆಗುಂದು ಅಂತ ಶಪಕೋಟ್ಬಿಡೋದ. ಈ ಶಾಪದಿಂದ ಮುಕ್ತಿ ಪಡೆಯಲು,  ಚಂದ್ರನು ಶಿವನಲ್ಲಿ ಶರಣಾದನು, ಕಾರ್ತಿಕ ಮಾಸದ ಸೋಮವಾರದಂದು ಶಿವನಿಗೆ ತಪಸ್ಸು ಮಾಡಿದನು. ಶಿವನು ಸಂತುಷ್ಟನಾಗಿ ಆಶೀರ್ವಾದಿಸಿದನು – “ನೀನು ಕ್ಷಯವಾಗುವೆ, ಮತ್ತೆ ಬೆಳಗುವೆಯೂ ಹೌದು. ನಿನ್ನಿಂದಲೇ ದಿನ-ತಿಥಿಗಳು ನಡೆಯಲಿ.”

ಆ ದಿನದಿಂದ ಚಂದ್ರನ ಕ್ಷಯ-ವೃದ್ಧಿ ಚಕ್ರ ಆರಂಭವಾಯಿತು. ಅದರಿಂದಲೇ ರೂಪುಗೊಂಡವು.

🌑 ಅಮಾವಾಸ್ಯೆ (ಚಂದ್ರ ಸಂಪೂರ್ಣ ಕ್ಷಯವಾದ ದಿನ)

🌕 ಹುಣ್ಣಿಮೆ (ಚಂದ್ರ ಸಂಪೂರ್ಣ ವೃದ್ಧಿಯಾದ ದಿನ)

ಇದರಿಂದ ಕಾಲದ ಮಾಪನ — ತಿಥಿಗಳು, ಮಾಸ, ಪಾಕ್ಷಗಳು ಎಲ್ಲವೂ ನಿರ್ಮಿತವಾದವು. ಜೊತೆಗೆ ಅನುಗ್ರಹ ತೋರಿದ ಶಿವನು ಚಂದ್ರನನ್ನು ತನ್ನ ಶಿರಸ್ಸಿನ ಮೇಲೆ (ಜಟೆಯಲ್ಲಿ) ಧರಿಸಿದನು. ಶಿವನಿಗೆ ಚಂದ್ರಮೌಳೀಶ್ವರ ಅಥವಾ ಸೋಮೇಶ್ವರ ಎಂಬ ಹೆಸರು ಬಂದಿತು . ಚಂದ್ರನಿಗೆ ಶಿವನ ಕೃಪೆ ದೊರೆತ ಈ ದಿನವು ಕಾರ್ತಿಕ ಮಾಸದ ಸೋಮವಾರವಾಗಿತ್ತು. ಆದ್ದರಿಂದ, ಈ ಮಾಸದ ಎಲ್ಲಾ ಸೋಮವಾರಗಳು ಬಹಳ ವಿಶೇಷ ಮತ್ತು ಫಲದಾಯಕ. ಶಿವನಿಗೆ ಬಿಲ್ವದಳ ಅರ್ಪಣೆ ಮಾಡಿ, ಓಂ ನಮಃ ಶಿವಾಯ ಎಂಬ ಪಂಚಾಕ್ಷರಿ ಜಪ ಮಾಡಿದರೆ — ಆತ್ಮಶುದ್ಧಿ, ಶಾಂತಿ ಮತ್ತು ಜೀವನದ ಶ್ರೇಯಸ್ಸು ನಿಶ್ಚಿತ.”

Leave a Comment

Your email address will not be published. Required fields are marked *

Scroll to Top